Cutdown Madhvacharya name from Nadageethe -ನಾಡಗೀತೆಯಿಂದ ಮಧ್ವಾಚಾರ್ಯರ ಹೆಸರನ್ನು ತೆಗೆಯಬೇಕೆಂದು ಆಗ್ರಹ.
Cutdown Madhvacharya name from Nadageethe
ನಾಡಗೀತೆಯಿಂದ ಮಧ್ವಾಚಾರ್ಯರ ಹೆಸರನ್ನು ತೆಗೆಯಬೇಕೆಂದು ಆಗ್ರಹ.
ರಾಷ್ಟ್ರಕವಿ ಕುವೆಂಪುರವರು ಕವಿ ಅಷ್ಟೆಅಲ್ಲ, ವೇದಾಂತಿ ಕೂಡ ಹೌದು. ಶ್ರೀರಾಮಯಣದರ್ಶನಂ ಎಂಬ ಮೇರು ಕೃತಿಯನ್ನು ಕೊಟ್ಟವರು. ಕುವೆಂಪುರವರು ರಚಿಸಿದ "ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ " ಎಂಬ ಹಾಡನ್ನು ಜನವರಿ 6 2004 ರಂದು ನಾಡಗೀತೆಯನ್ನಾಗಿ ಮಾನ್ಯ ಕರ್ನಾಟಕ ರಾಜ್ಯ ಸರ್ಕಾರವು ಆಯ್ಕೆ ಮಾಡಿತು.
ಕೆಲವೊಂದಿಷ್ಟು ಮಂದಿ ಈ ಹಾಡಿನಲ್ಲಿ ಮಧ್ವಾಚಾರ್ಯರ ಹೆಸರಿಲ್ಲ ಎಂಬ ಕಾರಣಕ್ಕೆ ವಿವಾದ ಸೃಷ್ಟಿ ಮಾಡಿ, ಒತ್ತಡ ಪೂರ್ವಕವಾಗಿ ಈ ಹಾಡಿನಲ್ಲಿ ಮಧ್ವಾಚಾರ್ಯರ ಹೆಸರನ್ನು ಸೇರಿಸುವಂತೆ ಮಾಡಿದರು.
ಮಧ್ವಾಚಾರ್ಯರ ಹೆಸರನ್ನು ಸೇರಿಸುವ ಮೂಲಕ ಮೂಲ ಹಾಡನ್ನು ತಿರುಚಿದಂತಾಗಿದೆ.
ಇದರಿಂದ ರಾಷ್ಟ್ರಕವಿಗಳಿಗೆ ಅಪಮಾನ ಮಾಡಿದಂತಾಗಿದೆ.
ಮಧ್ವಾಚಾರ್ಯರ ಹೆಸರನ್ನು ಕುವೆಂಪುರವರು ಯಾಕೆ ಕೈಬಿಟ್ಟಿದ್ದರು ? ಜ್ಞಾನಪೀಠ ಪ್ರಶಸ್ತಿಪಡೆದ ಕುವೆಂಪುರವರಿಗೆ ಮಧ್ವಾಚಾರ್ಯರು ತಿಳಿದಿರಲಿಲ್ಲವೇ ? ಅಥವಾ ಹಾಡು ಬರೆಯುವಾಗ ಮರೆತುಹೋಯಿತೇ !? ಎಂಬ ಪ್ರಶ್ನೆಗಳಿಗೆ ಕುವೆಂಪುರವರ ಮಗ ಪೂರ್ಣ ಚಂದ್ರ ತೇಜಸ್ವಿಯವರೇ ಉತ್ತರ ಕೊಟ್ಟಿರುತ್ತಾರೆ.
ನಮ್ಮ ತಂದೆಯವರಾದ ಕುವೆಂಪುರವರು, ಮಧ್ವಾಚಾರ್ಯರ ಹೆಸರನ್ನು ಹಾಡಿನಲ್ಲಿ ಬರೆದಿರುವುದಿಲ್ಲ. ಅದಕ್ಕೆ ಕಾರಣ ಮಧ್ವಾಚಾರ್ಯರ ಸಿದ್ಧಾಂತವೆ. ಸ್ತ್ರೀಯರಿಗೆ ಮತ್ತು ಶೂದ್ರರಿಗೆ ಮೋಕ್ಷವಿಲ್ಲ , ಶೂದ್ರರು ನಿತ್ಯ ನರಕವಾಸಿಗಳು ಎಂದು ಸಾರುವ ಮಧ್ವ ಸಿದ್ಧಾಂತ ನಮಗೆ ಮಾನ್ಯವಲ್ಲ.
ಭೇದ ತಾರತಮ್ಯ ಮಾಡುವ ಮೂಲಕ ಬೇರೆ ಜಾತಿಯವರನ್ನು ಕೀಳಾಗಿ ನೋಡುವ ಮಧ್ವ ಸಿದ್ಧಾಂತವನ್ನು ನಾವೇಕೆ ದಿನ ಸ್ಮರಿಸಬೇಕು ಎಂದು ಕವಿ,ಸಾಹಿತಿ, ವಿಚಾರವಂತ, ಪ್ರಜ್ಞಾವಂತರಾದ ಪೂರ್ಣಚಂದ್ರ ತೇಜಸ್ವಿಯವರು ಹೇಳಿರುತ್ತಾರೆ.
ಕರ್ನಾಟಕರತ್ನ ಕುವೆಂಪುರವರು ರಚಿಸಿದ ಮೂಲ ಹಾಡನ್ನು ಮಾರ್ಪಾಟು ಮಾಡುವುದು ಸರಿಯಲ್ಲ. ಹಾಗಾಗಿ ಹಾಡಿನಲ್ಲಿ ಮಧ್ವಾಚಾರ್ಯ ಹೆಸರನ್ನು ಸೇರಿಸಬಾರದು, ತೆಗೆಯಬೇಕು ಎಂದು ಪೂರ್ಣಚಂದ್ರ ತೇಜಸ್ವಿಯವರು ಉಗ್ರಹೋರಾಟವನ್ನು ಮಾಡಿದ್ದರು.
ಪೂರ್ಣಚಂದ್ರ ತೇಜಸ್ವಿಯವರು ಕೊಟ್ಟ ಕಾರಣ ಸತ್ಯವೇ ಆಗಿದೆ.(ಪುರುಷರಿಗಿಂತ ಸ್ತ್ರೀಯರನ್ನು ಕೀಳಾಗಿ ಕಾಣುವ ವಾಕ್ಯಗಳನ್ನು ಸುಮಧ್ವವಿಜಯ, ಮಹಾಭಾರತ ತಾತ್ಪರ್ಯ ನಿರ್ಣಯ, ಗೀತಾ ತಾತ್ಪರ್ಯ ನಿರ್ಣಯಗಳಲ್ಲಿ ಕಾಣಬಹುದು). ಪೂರ್ಣಚಂದ್ರ ತೇಜಸ್ವಿಯವರು ಅಧ್ಯಯನಶೀಲರು, ಮಧ್ವ ಸಿದ್ಧಾಂತವನ್ನು ಅಧ್ಯಯನ ಮಾಡದೆ ಹೇಳಿಕೆ ಕೊಟ್ಟಿಲ್ಲ.
ಕೇವಲ 1% ಅಥವಾ 2 % ಜನ ಮಾತ್ರ ಮಧ್ವ ಸಿದ್ಧಾಂತ ಅನುಸರಿಸುವುದು. ಅವರಿಗಾಗಿ ಹಾಡನ್ನು ಮಾರ್ಪಾಡು ಮಾಡುವುದು ಸರಿಯಲ್ಲ.
ಕೆಲವೊಂದಿಷ್ಟು ಜನ ಈ ಹಾಡನ್ನು ವಿವಾದ ಮಾಡಿದ್ದು ಯಾಕೆ ? ಅದಕ್ಕೆ ಕಾರಣ ಹೀಗಿದೆ:-
ಮಾನ್ಯ ರಾಜ್ಯ ಸರ್ಕಾರವು "ಜಯ ಭಾರತ ಜನನಿಯ ತನುಜಾತೆ" ಎಂಬ ಹಾಡನ್ನು ರಾಷ್ಟಗೀತೆಯನ್ನಾಗಿ ಆಯ್ಕೆ ಮಾಡಿದ ನಂತರ, ಈ ಹಾಡನ್ನು ಶಾಲೆಗಳಲ್ಲಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಹೇಳಬೇಕು. ಅಂತಹ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸತಕ್ಕದ್ದು ಎಂದು ನಿಯಮಾವಳಿಗಳನ್ನು ಹೊರಡಿಸಿತ್ತು. ಈ ಹಾಡಿನಲ್ಲಿ ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರ ಹೆಸರು ಬಂದಿರುವ ಕಾರಣ, ಮಾಧ್ವರಿಗೆ (ಮಧ್ವ ಸಿದ್ಧಾಂತದ ಅನುಯಾಯಿಗಳಿಗೆ) ಸಹಿಸಲಾಗಲಿಲ್ಲ. ಮಾಧ್ವ ಸಿದ್ಧಾಂತದಲ್ಲಿ ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರನ್ನು ಬಹಳ ತುಚ್ಛವಾಗಿ ನಿಂದಿಸಿರುತ್ತಾರೆ. ನಾಡಗೀತೆ ಕೇಳಿದಾಗ ಎದ್ದುನಿಂತು ಗೌರವ ಸಲ್ಲಿಸಿದರೆ ಅದು ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರಿಗೆ ಗೌರವ ಕೊಟ್ಟಂತೆ ಆಗುತ್ತದೆ. ಮತ್ತು ಶ್ರೀಶ್ರೀ ಶಂಕರಾಚಾರ್ಯರ ಅನುಯಾಯಿಗಳಾದ ಶ್ರೀಶ್ರೀ ವಿದ್ಯಾರಣ್ಯರ, ಶ್ರೀರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ ಹೆಸರುಗಳು ಈ ಹಾಡಿನಲ್ಲಿ ಇದೆ. ಹಾಗಾಗಿ (ಮಧ್ವ ಸಿದ್ಧಾಂತದ ಅನುಗುಣವಾಗಿ ) ಇವರೆಲ್ಲರಿಗೂ ಗೌರವ ಕೊಡಲು ಇಚ್ಛೆಯಿಲ್ಲದೆ. ಮತ್ತು ಇವರುಗಳ ಹೆಸರು ಇದೆಯಲ್ಲವೇ ಎಂಬ ಹೊಟ್ಟೆಉರಿಯ (jealous) ಕಾರಣದಿಂದ ಮಧ್ವಾಚಾರ್ಯರ ಹೆಸರನ್ನು ಸೇರಿಸಿ ಎಂದು ವಿವಾದ ಹುಟ್ಟುಹಾಕಿದರು. (ಮಾಧ್ವ ಗ್ರಂಥಗಳಾದ ಮಣಿಮಂಜರಿ, ಸುಮಧ್ವವಿಜಯ ಇತ್ಯಾದಿ ಗ್ರಂಥಗಳು ಇವಕ್ಕೆ ದಾಖಲೆ) ಕುವೆಂಪುರವರು ಇವೆಲ್ಲವನ್ನು ಚೆನ್ನಾಗಿಯೇ ಅರಿತಿದ್ದರು. ಶ್ರೀರಾಮಕೃಷ್ಣ ಪರಮಹಂಸರ ಅಪ್ಪಟ ಭಕ್ತರಾಗಿದ್ದ , ಸ್ವಾಮಿ ವಿವೇಕಾನಂದರ ಅನುಯಾಯಿಯಾಗಿದ್ದ ಕುವೆಂಪುರವರು "ಗುರುಪರಂಪರೆಗೆ ಅವಮಾನ ಮಾಡಿರುವ ಮಧ್ವ ಸಿದ್ಧಾಂತದವನ್ನು" ಉದ್ದೇಶ ಪೂರ್ವಕವಾಗಿಯೇ ಕೈಬಿಟ್ಟಿದ್ದರು.
ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪಡೆದ ಕುವೆಂಪುರವರು ರಚಿಸಿದ ಗೀತೆಯನ್ನು ಅವರ ಮರಣಾನಂತರ ಮಾರ್ಪಾಡು ಮಾಡುವುದು ಸರಿಯಲ್ಲ. ಇದು ರಾಷ್ಟ್ರಕವಿಗೆ ಮಾಡಿದ ಅವಮಾನ.
ಮಧ್ವಾಚಾರ್ಯರಿಗೆ ಗೌರವ ಸಲ್ಲಿಸಬೇಕಾದರೆ ಅದಕ್ಕೆ ಬೇರೆ ಯೋಜನೆಗಳನ್ನು ಹಾಕಿಕೊಳ್ಳಲಿ. ಅದನ್ನು ಬಿಟ್ಟು ಕವಿ (ಅನುಮತಿ ಇಲ್ಲದೆ) ಮರಣಾನಂತರ ಅವರು ರಚಿಸಿದ್ದನ್ನು ಬಲವಂತವಾಗಿ ಮಾರ್ಪಾಡು ಮಾಡಬಾರದು. ಅದು ಸಾಮಾನ್ಯ ವ್ಯಕ್ತಿಯ ರಚನೆಯಲ್ಲ " ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪಡೆದ ಗೌರವಾನ್ವಿತ " ಕವಿಯ ಕೃತಿ ಈ ನಾಡಗೀತೆ.
ಹಾಗಾಗಿ ನಾಡಗೀತೆಯಿಂದ ಮಧ್ವಾಚಾರ್ಯರ ಹೆಸರನ್ನು ತೆಗೆದು, ಮೂಲ ಕೃತಿಯನ್ನು ಉಳಿಸಿಕೊಳ್ಳುವ ಮೂಲಕ ರಾಷ್ಟ್ರಕವಿಗಳಿಗೆ ಗೌರವ ಸಲ್ಲಿಸಬೇಕೆಂದು - ಕನ್ನಡ ನಾಡಿನ ಜನತೆಯ ಮನವಿ.
ಕನ್ನಡ ನಾಡಿನ ಶ್ರೇಷ್ಠಕವಿ ಪೂರ್ಣಚಂದ್ರ ತೇಜಸ್ವಿಯವರ ಕನಸನ್ನು ಸಾಕಾರ ಮಾಡಿದಂತೆ ಆಗುತ್ತದೆ. ಅವರ ಹೋರಾಟಕ್ಕೆ ಸಫಲ ದೊರಕಿಸಿಕೊಟ್ಟಂತಾಗುತ್ತದೆ.
ದಯವಿಟ್ಟು ಎಲ್ಲರೂ ಇದಕ್ಕೆ ಸಹಿ ಹಾಕಬೇಕೆಂದು ವಿನಮ್ರ ಪ್ರಾರ್ಥನೆ 🙏
(First name, last name, city , country ಹಾಕಿದರೂ ಸಾಕು)
(ರಾಷ್ಟ್ರಕವಿ ಕುವೆಂಪು ವಿರಚಿತ ಮೂಲ ನಾಡಗೀತೆ - ಇದರಲ್ಲಿ ಮಧ್ವಾಚಾರ್ಯರ ಹೆಸರಿಲ್ಲ, ಕೇಳಿ ವೀಡಿಯೋ ಸಮಯ 1:17ಕ್ಕೆ)
Sreenath Rugvedi #Shankara_ninda_nirmoolana_abhiyana Contact the author of the petition